ಮೆಟ್‌ ಗಾಲಾದಲ್ಲಿ ಇಶಾ ಅಂಬಾನಿ ಧರಿಸಿದ ಈ ಬಟ್ಟೆ ತಯಾರಿಸೋಕೆ ಬರೋಬ್ಬರಿ 10 ಸಾವಿರ ಗಂಟೆ ಬೇಕಾಯ್ತಂತೆ!

By Vinutha PerlaFirst Published May 7, 2024, 10:03 AM IST
Highlights

ಬಿಲಿಯನೇರ್‌ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಪುತ್ರಿ ಇಶಾ ಅಂಬಾನಿ ಈ ವರ್ಷ ಮೆಟ್ ಗಾಲಾ 2024ರಲ್ಲಿ ಭಾಗವಹಿಸಿದ್ದಾರೆ. ಇಶಾ ಸ್ಟೈಲಿಶ್‌ ಗೋಲ್ಡನ್ ಫ್ಲೋರಲ್ ಗೌನ್ ಧರಿಸಿ ಮಿಂಚಿದರು. ಫ್ಲೋರಲ್‌ ಗೌನ್‌ನಲ್ಲಿ ಕುಶಲಕರ್ಮಿಗಳ ನಾಜೂಕಿನ ಕೆಲಸ ಹೈಲೈಟ್ ಆಗಿದೆ. ಅಚ್ಚರಿಯ ವಿಚಾರ ಅಂದ್ರೆ ಈ ಗೌನ್‌ನ್ನು ಬರೋಬ್ಬರಿ 10000 ಗಂಟೆಗಳನ್ನು ತೆಗೆದುಕೊಂಡು ತಯಾರಿಸಲಾಗಿದೆ
 

ಬಿಲಿಯನೇರ್‌ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿಯ ಪುತ್ರಿ ಇಶಾ ಅಂಬಾನಿ ಈ ವರ್ಷ ಮೆಟ್ ಗಾಲಾ 2024ರಲ್ಲಿ ಭಾಗವಹಿಸಿದ್ದಾರೆ. ಈ ರೆಡ್ ಕಾರ್ಪೆಟ್ ಶೋನಲ್ಲಿ ಇಶಾ ಅಂಬಾನಿಯ ಸ್ಟೈಲಿಶ್ ಲುಕ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ಇಶಾ ಗೋಲ್ಡನ್ ಫ್ಲೋರಲ್ ಗೌನ್ ಧರಿಸಿ ಮಿಂಚಿದರು. ಫ್ಲೋರಲ್‌ ಗೌನ್‌ನಲ್ಲಿ ಕುಶಲಕರ್ಮಿಗಳ ನಾಜೂಕಿನ ಕೆಲಸ ಹೈಲೈಟ್ ಆಗಿದೆ. ಅಚ್ಚರಿಯ ವಿಚಾರ ಅಂದ್ರೆ ಈ ಗೌನ್‌ನ್ನು ಬರೋಬ್ಬರಿ 10000 ಗಂಟೆಗಳನ್ನು ತೆಗೆದುಕೊಂಡು ತಯಾರಿಸಲಾಗಿದೆ

ಅನಿತಾ ಶ್ರಾಫ್ ಮತ್ತು ರಾಹುಲ್ ಮಿಶ್ರಾ ಇಶಾ ಅಂಬಾನಿಯ ಈ ಗೌನ್ ವಿನ್ಯಾಸ ಮಾಡಿದ್ದಾರೆ. ಅನಿತಾ ಶ್ರಾಫ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಇಶಾ ಸ್ಟೈಲಿಶ್‌ ಲುಕ್‌ನ್ನು ಪೋಸ್ಟ್ ಮಾಡಿದ್ದಾರೆ. ಈ ಗೌನ್‌ನ ವಿಶೇಷತೆಯನ್ನು ವಿವರಿಸಿದ ಅನಿತಾ, 'ಭಾರತೀಯ ವಿನ್ಯಾಸಕ ರಾಹುಲ್ ಮಿಶ್ರಾ ವಿನ್ಯಾಸಗೊಳಿಸಿದ ಕೈಯಿಂದ ಕಸೂತಿ ಮಾಡಿದ ಸೀರೆ ಗೌನ್‌ನ್ನು ಇಶಾ ಧರಿಸಿದ್ದಾರೆ. ಈ ವರ್ಷದ ಮೆಟ್ ಗಾಲಾ ಥೀಮ್ 'ದಿ ಗಾರ್ಡನ್ ಆಫ್ ಟೈಮ್' ಗಾಗಿ, ರಾಹುಲ್ ಮತ್ತು ನಾನು ಇಶಾ ಅವರ ಈ ಕಸ್ಟಮ್ ನೋಟದಲ್ಲಿ ಪ್ರಕೃತಿಯ ವೈಭವದ ಮತ್ತು ಸಮೃದ್ಧ ಜೀವನಚಕ್ರವನ್ನು ಚಿತ್ರಿಸಲು ಯೋಜಿಸಿದ್ದೇವೆ, ಇದು ಪೂರ್ಣಗೊಳಿಸಲು 10,000 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು' ಎಂದು ತಿಳಿಸಿದ್ದಾರೆ.

ದುಬೈನಲ್ಲಿ 650 ಕೋಟಿಯ ಬಂಗಲೆ, ಡೈಮಂಡ್ ನೆಕ್ಲೇಸ್‌; ಅಂಬಾನಿ ದಂಪತಿ, ಮಕ್ಕಳಿಗೆ ಕೊಟ್ಟಿರೋ ದುಬಾರಿ ಗಿಫ್ಟ್‌ಗಳಿವು!

ಮೆಟ್ ಗಾಲಾ 2024ಗಾಗಿ ಡ್ರೆಸ್ ಕೋಡ್ ಮತ್ತು ಥೀಮ್
ಈ ವರ್ಷ 2024ರ ಮೆಟ್ ಗಾಲಾ ಡ್ರೆಸ್ ಕೋಡ್ 'ದಿ ಗಾರ್ಡನ್ ಆಫ್ ಟೈಮ್' ಆಗಿದೆ. ಸ್ಲೀಪಿಂಗ್ ಬ್ಯೂಟೀಸ್: ರಿವಾಕಿಂಗ್ ಫ್ಯಾಶನ್.' ಈ ಥೀಮ್ ಅನ್ನು ಅನುಸರಿಸಿ, ಮೋನಾ ಪಟೇಲ್, ಸಬ್ಯಸಾಚಿ ಮುಖರ್ಜಿ ಮತ್ತು ಆಲಿಯಾ ಭಟ್ ಅವರಂತಹ ಭಾರತೀಯ ಸೆಲೆಬ್ರಿಟಿಗಳು ಮೆಟ್ ರೆಡ್ ಕಾರ್ಪೆಟ್ ಅನ್ನು ಅಲಂಕರಿಸಿದ್ದಾರೆ.

ಮೆಟ್ ಗಾಲಾ ಎಂದರೇನು?
ಮೆಟ್ ಗಾಲಾ ಎಂಬುದು ಕಾಸ್ಟ್ಯೂಮ್ ಇನ್‌ಸ್ಟಿಟ್ಯೂಟ್ ಆಫ್ ದಿ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ಗಾಗಿ ಹಣವನ್ನು ಸಂಗ್ರಹಿಸುವ ಚಾರಿಟಿ ಕಾರ್ಯಕ್ರಮವಾಗಿದೆ. ಇದನ್ನು ಪ್ರತಿ ವರ್ಷ ವಾರ್ಷಿಕ ಕಾರ್ಯಕ್ರಮವಾಗಿ ಆಚರಿಸಲಾಗುತ್ತದೆ.

ಬಿಲಿಯನೇರ್ ಇಶಾ ಅಂಬಾನಿ, ಮಿಡಲ್‌ ಕ್ಲಾಸ್ ಜನರಂತೆ ಈ ಕೆಲ್ಸ ಮಾಡೋಕೆ ಇಷ್ಟ ಪಡ್ತಾರಂತೆ!

ಈವೆಂಟ್ ಸಾಮಾನ್ಯವಾಗಿ ಪ್ರತಿ ವರ್ಷ ಸುಮಾರು 450 ಭಾಗವಹಿಸುವವರನ್ನು ಒಳಗೊಂಡಿರುತ್ತದೆ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಸಮಾರಂಭದಲ್ಲಿ ಭಾಗಿಯಾಗುತ್ತಾರೆ. ಬ್ಲೇಕ್ ಲೈವ್ಲಿ, ಸಾರಾ ಜೆಸ್ಸಿಕಾ ಪಾರ್ಕರ್ ಮತ್ತು ರಿಹಾನ್ನಾ ಅವರಂತಹ ವಿದೇಶಿ ತಾರೆಗಳು ವರ್ಷಗಳ ಕಾಲ ಇದರಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ.

 

click me!