Asianet Suvarna News Asianet Suvarna News

ಪ್ರಧಾನಿ ಮೋದಿ, ಪುಟಿನ್ ಸೇರಿ ವಿಶ್ವ ನಾಯಕರ AI ಅಭಿವೃದ್ಧಿಪಡಿಸಿದ ಬಾಲ್ಯದ ಫೋಟೋ ವೈರಲ್!

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನ ಇದೀಗ ಹಲವು ಅದ್ಭುತಗಳನ್ನು ಸೃಷ್ಟಿಸಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ, ಜೋ ಬೈಡೆನ್ ಸೇರಿದಂತೆ ವಿಶ್ವನಾಯಕರು ಬಾಲ್ಯದ ಹೇಗೆ ಕಾಣುತ್ತಿದ್ದರು ಅನ್ನೋ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ವಿಡಿಯೋ ಒಂದು ಬಾರಿ ವೈರಲ್ ಆಗಿದೆ.

PM Modi to Vladimir Putin AI generated Childhood photos goes viral on Social Media ckm
Author
First Published Apr 22, 2024, 1:48 PM IST

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಇದೀಗ ಎಲ್ಲಾ ಕ್ಷೇತ್ರಗಳನ್ನು ಹಾಸು ಹೊಕ್ಕಿದೆ. ಊಹೆಗೂ ನಿಲುಕ ರೀತಿಯಲ್ಲಿ ಎಐ ತಂತ್ರಜ್ಞಾನ ಕಾರ್ಯನಿರ್ವಹಿಸುತ್ತಿದೆ. ಇದೀಗ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ವಿಶ್ವನಾಯಕರು ಬಾಲ್ಯದಲ್ಲಿ ಹೇಗೆ ಕಾಣುತ್ತಿದ್ದರು ಅನ್ನೋ ವಿಡಿಯೋವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸೇರಿದಂತೆ ಹಲವು ವಿಶ್ವನಾಯಕರ ಬಾಲ್ಯದ ದಿನಗಲನ್ನು ಈ ಎಐ ವಿಡಿಯೋ ನೆನಪಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪ್ರಕಾರ ಬಾಲ್ಯದ ಫೋಟೋಗಳಲ್ಲಿ ವಿಶ್ವನಾಯಕರು ಎಂದು ಬರೆಯಲಾಗಿದೆ.  ಈ ವಿಡಿಯೋ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಇದರ ಜೊತೆಗೆ ಮತ್ತಷ್ಟು ನಾಯಕರು, ಸೆಲೆಬ್ರೆಟಿಗಳ ಬಾಲ್ಯದ ಫೋಟೋ ಅಭಿವೃದ್ಧಿಪಡಿಸುವಂತೆ ಮನವಿ ಮಾಡಲಾಗಿದೆ.

28 ವರ್ಷಗಳ ಹಿಂದೆ ಇದೆ ದಿನ ನಡೆದಿತ್ತು ಅಚ್ಚರಿ, AI ಕಂಪ್ಯೂಟರ್ ಜೊತೆ ಚೆಸ್ ಚಾಂಪಿಯನ್ ಕಾದಾಟ!

ಅಮೆರಿಕ ಅಧ್ಯಕ್ಷ ಜೋ ಬೈಡೆನ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡು, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್, ಬ್ರಿಟನ್ ಮಾಜಿ ಅಧ್ಯಕ್ಷ ಬೊರಿಸ್ ಜಾನ್ಸನ್, ಜರ್ಮನಿಯ ಮಾಜಿ ಚಾನ್ಸಲರ್ ಎಂಜೆಲಾ ಮಾರ್ಕೆಲ್, ಉಕ್ರೇನ್ ಅಧ್ಯಕ್ಷ ವೊಲಿಡಮಿರ್ ಝೆಲೆನ್ಸ್ಕಿ, ಪ್ರಧಾನಿ ನರೇಂದ್ರ, ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಜರ್ಮನಿ ಚಾನ್ಸಲರ್ ಒಲಾಫ್ ಸ್ಕೂಲ್ಜ್ ಸೇರಿದಂತೆ ಹಲವು ನಾಯಕರು ಬಾಲ್ಯದ ಫೋಟೋಗಳನ್ನು ಎಐ ಮೂಲಕ ಅಭಿವೃದ್ಧಿಪಡಿಸಲಾಗಿದೆ.

 

 

ಈ ಪೋಸ್ಟ್‌ಗೆ ಹಲವರು ಕಮೆಂಟ್ ಮಾಡಿದ್ದಾರೆ. ವಿಶ್ವನಾಯಕರ ಬಾಲ್ಯದ ಫೋಟೋಗಳಲ್ಲಿ ವ್ಲಾದಿಮಿರ್ ಪುಟಿನ್ ಹೆಚ್ಚು ಕ್ಯೂಟ್ ಆಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಜಸ್ಟಿನ್ ಟ್ರುಡು ರಾಕ್‌ಸ್ಟಾರ್ ರೀತಿ ಕಾಣುತ್ತಿದ್ದಾರೆ. ಇನ್ನು ಜೋ ಬೈಡೆನ್ ಬಾಲ್ಯವಸ್ಥೆಯಲ್ಲಿದ್ದರು ಅನ್ನೋದು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. 

ಪೊರ್ನ್ ಇಂಡಸ್ಟ್ರಿಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ತದ್ರೂಪಿ ಸೃಷ್ಟಿಸಿದ ಅಡಲ್ಟ್ ನಟಿ!

ಈ ಬಾಲ್ಯದ ಫೋಟೋಗಳ ವಿಡಿಯೋ ಪೋಸ್ಟ್ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ಇದೇ ವೇಳೆ ರಾಕ್‌ಸ್ಟಾರ್ ಆಗಿ ವಿಶ್ವನಾಯಕರು ಅನ್ನೋ ಎಐ ಅಭಿವೃದ್ಧಿಪಡಿಸಿ ಪೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋದಲ್ಲಿ ರಾಕ್ ಸ್ಟಾರ್ ಅವತರಾದಲ್ಲಿ ಅಮೆರಿಕ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಫ್, ಅಧ್ಯಕ್ಷ ಜೋ ಬೈಡೆನ್, ಕಿಮ್ ಜಾಂಗ್ ಉನ್, ಪ್ರಧಾನಿ ನರೇಂದ್ರ ಮೋದಿ, ಪೋಪ್ ಫ್ರಾನ್ಸಿಸ್ ಸೇರಿದಂತೆ ಹಲವರ ಅವತಾರಗಳು ಇದರಿಲ್ಲಿದೆ.


 

Follow Us:
Download App:
  • android
  • ios